ನುಗ್ಗೇಹಳ್ಳಿ ಪಂಕಜ ( ಜನನ : ಜೂನ್ ೧೯೨೯, ೨) ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಬರೆಯುವ ಭಾರತೀಯ ಬರಹಗಾರ್ತಿ. ಪಂಕಜ ಅವರ ತಾಯಿ ಶಾಂತಮ್ಮ ಮತ್ತು ತಂದೆ ಎಸ್.ಪಿ.ರಾಘವಾಚಾರ್ ; ಪತಿ ಎನ್.ತಿರುಮಲೆ. ಅವರು ಕನ್ನಡ ಭಾಷೆಯ ಪ್ರಮುಖ ಲೇಖಕರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಅವರ ಕೃತಿಗಳಲ್ಲಿ ಕಾದಂಬರಿಗಳು, ಸಣ್ಣ ಕಥೆಗಳು, ಹಾಗೂ ನಾಟಕಗಳು ಸೇರಿವೆ. ಅವರ ಶ್ರೇಷ್ಠ ಇಂಗ್ಲೀಷ್ ಕವನಗಳಿಗೆ ಇಂಟರ್‌ನ್ಯಾಷನಲ್ ಅಕಾಡೆಮಿಯ "ವಿಶ್ವ ಕವನ ಪ್ರಶಸ್ತಿ"ಯನ್ನು ನೀಡಲಾಯಿತು. == ಗ್ರಂಥಸೂಚಿ == === ಕಾದಂಬರಿಗಳು === ಕಾವೇರಿಯ ಅರ್ಥರವ ಬರಲೇ ಇನ್ನು ಯಮುನೆ ? ಉಷಾನಿಷಿ ಮಲಯ ಮಾರುತ ವೀಣಾ ಓಹ್ ವೀಣಾ! ಮುಗಿಲಮಿಂಚು ಗಗನ ನಮಸ್ಕಾರ ಗರಡುಅಮ್ಮನವರೇ ಏನ್ ಸಮಾಚಾರ? ಬಳ್ಳಿ - ಮೊಗ್ಗು ದೀಪಾ ಗೂಡು ಬಿಟ್ಟ ಹಕ್ಕಿ ತೇಲಿ ಬಂದ ಬಂಧನ ಸಂಧ್ಯಾ ಬರುವಳೇ ? ಪ್ರತೀಕಾರದ ಸುಳಿಯಲ್ಲಿ ತೆರೆ ಸರಿಯಿತು ಅಲೆಗೆ ಸಿಕ್ಕಿದ ಎಲೆ ಟುವ್ವಿ ಟುವ್ವಿ, ಉಳಿಯಿತು ಗುಬ್ಬಚ್ಚಿ ಕೋಣೆಗೊಂದು ಕಥೆ ಮೂಲೆಗೊಂದು ಮಾತು ಎರೆಡು ರೆಂಬೆಗಳು ಒಂದು ವಸಂತ ಋತುವಿನಲ್ಲಿ ಮೋಹಿನಿಗೊಂದು ಹಾಡು ಅನುರಾಗದ ಸೆಳೆತ ಬಾಳಿನ ಉಯ್ಯಾಲೆ === ಸಣ್ಣ ಕಥೆಗಳು === ಅರ್ಧ ಚಂದ್ರ ಇಪ್ಪತ್ತು ವರ್ಷಗಳ ಹಿಂದೆ ತಾಯಿ ಮರ ಸೇವಕಿಯ ಶಿಕ್ಷಣ === ನಾಟಕಗಳು === ಸಾಲೋಮ್ ಆ ಒಂದು ವಿಷದ ಘಳಿಗೆ ಅರಳಿಕಟ್ಟೆ ರಾಮಾಚಾರಿಯ ಎರಡನೇ ಹೆಂಡತಿ == ಪುರಸ್ಕಾರ == “ಬಳ್ಳಿ ಮೊಗ್ಗು” ಕೃತಿಗೆ ೧೯೭೮ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಉತ್ತಮ ಮಹಿಳಾ ಪುಸ್ತಕ ಬಹುಮಾನ ದೊರೆತಿದೆ. == ಚಲನಚಿತ್ರಗಳು == ಪಂಕಜಾ ಅವರ “ಬರಲೆ ಇನ್ನು ಯಮುನೆ” ಕಾದಂಬರಿಯು ಸಿಪಾಯಿ ರಾಮು ಹೆಸರಿನಲ್ಲಿ ಚಲನಚಿತ್ರವಾಗಿ ಜನಪ್ರಿಯವಾಗಿದೆ. ಈ ಚಿತ್ರದಲ್ಲಿ ಆರತಿ ನಾಯಕಿಯಾಗಿ ಹಾಗು ರಾಜಕುಮಾರ್ ನಾಯಕರಾಗಿ ಅಭಿನಯಿಸಿದ್ದಾರೆ. ಅನಂತನಾಗ್, ಖುಷ್ಬೂ, ವನಿತಾ ವಾಸು ಅಭಿನಯದ "ಗಗನ" ಚಿತ್ರವೂ ಪಂಕಜಾ ಅವರ ಕಾದಂಬರಿ ಆಧರಿಸಿದ ಚಿತ್ರ. == ಉಲ್ಲೇಖನಗಳು == == ಬಾಹ್ಯ ಕೊಂಡಿಗಳು == 2016-03-04 ವೇಬ್ಯಾಕ್ ಮೆಷಿನ್ ನಲ್ಲಿ.